ಚೆನ್ನಪ್ಪ
ಸು. 1750. ವೀರಶೈವ ಕವಿ. ಹಂಪೆಗೆ ದಕ್ಷಿಣದಲ್ಲಿರುವ ನಿಡಗಲ್ಲು ಈತನ ಸ್ಥಳ. ಗುರು ಪಂಚವಣ್ಣಿಗೆ ಚೆನ್ನಮಲ್ಲಿಕಾರ್ಜುನ. ಈತನ ಗ್ರಂಥ ಶಿವಶರಣ ಲೀಲಾಮೃತ. ಹನ್ನೊಂದು ಸಂಧಿಗಳಿರುವ ಈ ಕೃತಿ ಯಕ್ಷಗಾನದ ಧಾಟಿಯಲ್ಲಿದೆ. ಬಸವಣ್ಣನವರ ಮತ್ತು ಅವರ ಕಾಲದಲ್ಲಿನ ಶಿವಶರಣರ ಚರಿತಗಳನ್ನು ಇದರಲ್ಲಿ ಹೇಳಿದೆ. ಗ್ರಂಥಾರಂಭದಲ್ಲಿ ಹರಿಹರ, ರಾಘವಾಂಕ, ಭೀಮಕವಿ, ಚಾಮರಸ, ಗುಬ್ಬಿಯ ಮಲ್ಲಣಾರ್ಯ ಮೊದಲಾದ ಪೂರ್ವ ಕವಿಗಳ ಸ್ಮರಣೆ ಬರುತ್ತದೆ.

ಮುಮ್ಮಡಿ ಕೃಷ್ನರಾಜರ ಕಾಲದಲ್ಲಿ (ಸು.1825) ರಚಿತವಾದ ಸಿರಿಯಾಳ ಚರಿತ್ರೆ ಎಂಬ ಯಕ್ಷಗಾನಕ್ಕೆ ಚೆನ್ನಪ್ಪ ಕವಿಯ ಈ ಕೃತಿಯೇ ಆಧಾರವೆಂಬ ವಿಷಯ ಆ ಗ್ರಂಥದಿಂದ ತಿಳಿದುಬರುತ್ತದೆ.				(ಜಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ